top of page
Search

Paris Brest Paris 2023 - Shettappa Pirangi

Updated: Sep 27, 2023



ಅಂದು ಮಧ್ಯಾಹ್ನ ಸುಮಾರು 3 ಘಂಟೆಗೆ ನಾವೆಲ್ಲ ಪ್ಯಾರಿಸನ ರ್ಯಾಂಬೋಯಿಲಿಟ್ ನ ಪ್ರಾಂಗಣ ತಲುಪಿದೆವು ಅಲ್ಲಿ ಎತ್ತ ನೋಡಿದರತ್ತ ಹಚ್ಚ ಹಸಿರಿನಿಂದ ಕಂಗೊಳಿಸುತಿದ್ದ ಗಿಡಮರಗಳ ನೆರಳಿನ ಛಾಯೆಯಲ್ಲಿ ಬೇರೆ ಬೇರೆ ದೇಶಗಳಿಂದ ಕಿಕ್ಕಿರಿದು ಸೇರಿದ್ದ ಸರಿಸುಮಾರು 7-8 ಸಾವಿರ ಜನ ಸೈಕ್ಲಿಸ್ಟಗಳು, ಪಿಬಿಪಿಯ ಅತ್ಯುತ್ಸಾಹಿ ಸ್ವಯಂಸೇವಕರನ್ನ ಕಂಡು ಬೆರಗಾದ ಕ್ಷಣವದು. ಕಾರಣ ಅಲ್ಲಿ ಕಾರ್ಯನಿರ್ವಹಿಸುತಿದ್ದದ್ದು ಎಲ್ಲ 50-60ರ ಆಸುಪಾಸಿನ ಹದಿ ಹರೆಯದ ಯುವಕ ಯುವತಿಯರೆ. ಹೌದು ನಾನು ಇವರೆಗೆ ಹೆಚ್ಚೆಂದರೆ 2019ರಲ್ಲಿ ಹುಬ್ಬಳ್ಳಿ ಬೈಸಿಕಲ್ ಕ್ಲಬ್ಬಿನ ಲಾಂಗೆಸ್ಟ್ ಸಿಂಗಲ್ ಲೈನ್ ಗಿನ್ನೀಸ್ ವರ್ಲ್ಡ್ ರೆಕಾರ್ಡನಲ್ಲಿ ಸೇರಿದ್ದ 3000 ಜನ ಸೈಕ್ಲಿಷ್ಟಗಳನ್ನ ಕಂಡಿದ್ದೆ ಹೆಚ್ಚಾಗಿತ್ತು. ಅದೊಂದು ಅದ್ಭುತವಾದ ನೋಟಗಳನ್ನ ಹೊಂದಿದ ಸೈಕ್ಲಿಂಗನ.

ಜಾತ್ರೆಯಾಗಿತ್ತು, ಟೆಂಡಮ್ ಬೈಕ್, ವೆಲೋಬೈಕ್, ಸ್ಪೆಷಲ ಬೈಕ್, ಪಿಕ್ಸಿ, ಹೈ ಬ್ರ್ಯಾಂಡಗಳ ತರೇವಾರಿ ಸೈಕಲ್ಗಳು ನೋಡುಗರ ಕಣ್ಮಣ ಸೆಳೆಯುತ್ತಿದ್ದವು. ಪ್ರತಿ 15 ನಿಮಿಷಕ್ಕೊಂದರಂತೆ 300 ಜನ ಸೈಕ್ಲಿಷ್ಟಗಳ ಬ್ಯಾಚೊಂದನ್ನ ಸ್ಟಾರ್ಟ್ ಪಾಯಿಂಟ್ಗಳಿಂದ ಬಿಡುತ್ತಿದ್ದರು, ಜೊತೆಗೆ ಬೇರೆ ಬೇರೆ ದೇಶಗಳಿಂದ ಬಂದಂತಹ ಎಲ್ಲ ಸೈಕ್ಲಿಷ್ಟಗಳನ್ನ ಅವರ ದೇಶದ ಹೆಸರು ಹೇಳುತ್ತಾ ಹುರಿದುಂಬಿಸುವ ಕಾರ್ಯದಲ್ಲಿ ಸಂಘಟಕರು ಅತ್ಯುತ್ಸಾಹಿಯಾಗಿದ್ದರು, ಅಂತಹದರಲ್ಲಿ ಇಂಡಿಯಾ, ಇಂಡಿಯಾ ಎಂದಾಗ ನಮ್ಮಿಂದ ಹೊರಟ ಕೆಲ ಘೋಷವಾಕ್ಯಗಳ ಕೇಳಿ ಸಂಘಟಕ ಒಂದು ಕ್ಷಣ ತಬ್ಬಿಬ್ಬು, ಹಾಗೆ 6 ಘಂಟೆಯಿಂದ ಟೈಮ್ಚಿಪ್ ಮ್ಯಾಟನ ಕ್ರಾಸ್ ಮಾಡಿ ಶೂಚನಳೊಂದಿಗೆ(BMC) ಶುರುವಾದ ನಮ್ಮ ಪಯಣ ಸಾಗಿದ್ದು 119 ಕಿಮೀ ಮೊದಲನೆ ಕಂಟ್ರೋಲ ಪಾಯಿಂಟ್ ಮೊಂಟಗ್ನೇಯೆಡೆಗೆ. ಎಲ್ಲರು ಹರಿಬರಿಯಲ್ಲಿ ಸಾಗುತ್ತಿದ್ದರೆ ನಾವು ನಮ್ಮ ಪಾಡಿಗೆ ಸಾಗುತ್ತಿದ್ದೇವು, ಅದರ ಮದ್ಯೆ ನಮ್ಮ ಬೆಂಗಳೂರು ರ್ಯಾಂಡೋನಿಯರ್ಸನ ಕ್ಯಾಪ್ಟನ ಮೋಹನ ಶುಭ್ರಮಣ್ಯಂ ಸರ್ ಮತ್ತೆ ಬೆಂಗಳೂರಿನ ಉಳಿದ ಹಿರಿಯ ರೈಡರ್ಸಗಳ ಕಿವಿ ಮಾತುಗಳನ್ನ ನೆನಪಿಸಿಕೊಳ್ಳುತ್ತಾ ಕೆಲವು ಪೆಲಟಾನ್ ಗ್ರೂಪ್ ಗಳನ್ನ ಪಾಲೋ ಮಾಡುತ್ತಾ ಮುನ್ನಡೆಯುತ್ತಿರುವಾಗ ಸಿಗುತ್ತಿದ್ದ ಕೆಲ ಪರಿಚಿತರಿಗೆ ಶಾರ್ಟ್ ಆಗಿ ಹೈ ಮತ್ತೆ ಬೈ ಹೇಳುತ್ತಾ ಒಂದೊಳ್ಳೆಯ ಸ್ಪೀಡ್ ಕವರ ಮಾಡುವ ಮುಖಾಂತರ ಮೊದಲನೆ ಸಿಪಿಯ ಅಂತ್ಯದ ಜೊತೆಗೆ ಸೂರ್ಯನು ಸಹ ಅಸ್ತಂಗತನಾಗುತ್ತಿದ್ದನು. ನಂತರ ಮೊದಲೆ ತಂದಿದ್ದ ಚಿಕನ್ ಬಿರ್ಯಾನಿಯ ಸೇವನೆಯೊಂದೆಡೆಯಾದರೆ ಅಲ್ಲಿ ಛಳಿಯ ಭರಾಟೆ ಬೇರೆ ಶುರುವಾಗಿತ್ತು.

ನಮ್ಮ ಗುರುಗಳಾದ ಸಿದ್ದಲಿಂಗ ಶ್ವಾಮಿ ಸರ್ ಪ್ರಸಾದ ಸದಾಶಿವ ಸರ್ & ಧನಂಜಯ ಸರ್ ಗಳ ಅಣತಿಯಂತೆ ಮೊದಲೆ ಯುದ್ದಕ್ಕೆ ಸೇಕರಿಸಿಟ್ಪಿದ್ದ ಯುದ್ದಪರಿಕರಗಳಂತೆ, ಛಳಿಯ ಎಲ್ಲ ರಕ್ಷಾಕವಚಗಳನ್ನ ಮೈಗೇರಿಸಿಕೊಂಡು ಮುಂದಿನ ಪೆಲಟಾನಗಳ ಹುಡುಕಾಟದಲ್ಲಿರಬೇಕಾದರೆ ಸಿಕ್ಕಿದ್ದೆ ಸ್ವಿಡ್ಜರ್ಲ್ಯಾಂಡನ ಬೆಡಗಿ ಸಿಬಿಲ್ ಅಂತಾ ಸುಮಾರು 150-200 ಕಿಮೀ ವರೆಗೆ ಅವಳೊಂದಿಗೆ ಸಾಗಿದ್ದ ಪಯಣದ ಮದ್ಯೆ ಸ್ಥಳೀಯರು ಮದ್ಯ ರಾತ್ರಿಯಿಂದ ಹಿಡಿದು ಬೆಳಗಿನ ಜಾವದವರೆಗೂ ತಮ್ಮ ತಮ್ಮ ಮನೆಗಳ ಮುಂದೆ ಮನೆಯ ಎಲ್ಲ ಸದಸ್ಯರು ಸ್ವಯಂಕೃತರಾಗಿ ಊಟ, ತಿಂಡಿ, ಜ್ಯೂಸ್, ಡ್ರೈ ಪ್ರೂಟ್ಸನಂತಹ ಅದೇಷ್ಟೋ ಸಿಹಿ ಸಿಹಿಯಾದ ಖಾದ್ಯಗಳ ಹೂರಣವನ್ನೆ ಉಣಬಡಿಸುತ್ತಿದ್ದರು. ಅದರ ಜೊತೆಗೆ ಪ್ರತಿ ಸೈಕ್ಲಿಷ್ಟಗಳನ್ನ ಕಂಡಾಗ ಹುರಿದುಂಬಿಸುವ ರೀತಿಯಂತು ನಮ್ಮಲ್ಲಿ ಮತ್ತಷ್ಟೂ ಉತ್ಸಾಹ ಹೆಚ್ಚುತ್ತಿತ್ತು. ಅಲ್ಲಿಂದ ನಮ್ಮ ಎಚ್ ಬಿ ಸಿಯ ಪಾರ್ಟ್‌ನರ್ ಗುಲ್ಜಾರ ಸರ್ ಜೊತೆಗೂಡಿ ರಸ್ತೆಯುದ್ದಕ್ಕೂ ಫಸಲು ಫಸಲಾಗಿ ಬೆಳೆದು ನಿಂತಿದ್ದ ಕೆಂಪು & ಹಸಿರು ಸೇಬು ಹಣ್ಣುಗಳನ್ನ ಮರಗಳಿಂದ ಕಿತ್ತು ತಿನ್ನುತ್ತ ಆ ಹೊತ್ತಿನ ಊಟ & ಎನರ್ಜಿಯ ಸ್ಟೋರೆಜ್ ಕಾರ್ಯ ಮುಕ್ತಾಯ. 437ಕಿ ಮೀ ರೆಸ್ಟ್ ಪಾಯಿಂಟ್ ಲೋಡಿಯಾಕ್ ತಲುಪಲು ಮಧ್ಯಾಹ್ನದ ಬಿರು ಬಿಸಿಲಿನ ತಾಪಮಾನದ ಜೊತೆಗೆ ಕ್ಲೈಂಬಿಂಗ್ ಮಾಡುವ ಶತಪ್ರಯತ್ನ ಮಾತ್ರ ತಡೆಯಲಾಗಲಿಲ್ಲಾ, ನಿದ್ದೆಯಿಲ್ಲದ ಮೊದಲ ರಾತ್ರಿ ಬೇರೆ, ಬೆಟ್ಟ ಗುಡ್ಡಗಳನ್ನ ಏರಿದಷ್ಟು ಇನ್ನೂ ಕ್ಲೈಂಬಿಂಗ್, ಕ್ಲೈಂಬಿಂಗ್ ಎನ್ನತ್ತಾ ಲೋಡಿಯಾಕ್ ತಲುಪಿ ಡ್ರಾಪ್ ಬ್ಯಾಗ್ ಪಡೆದುಕೊಂಡು ಹೆಂಡತಿ ಕೈ ರುಚಿಯ ಶೇಂಗಾ ಹೋಳಿಗೆ, ಲಾಡು ಮತ್ತೆ ನಮ್ಮ ಗುರುಗಳಾದ ಪ್ರಸಾದ ಸರ್ ಮನೆಯಿಂದ ತಯಾರಿಸಿಕೊಂಡು ತಂದಿದ್ದ ಗೊಜ್ಜವಲಕ್ಕಿಯ ರುಚಿ ಫ್ರಾನ್ಸ್‌ನ ಬುಕೇಟಿಯ ಮುಂದೆ ಹೇಳತೀರದು. ಒಂದರ್ದ್ ಘಂಟೆಯ ವಿಶ್ರಾಂತಿಯ ನಂತರ ಪಯಣ ಮತ್ತೆ ಮುಂದಿನ ಸಿಪಿಯ ಬ್ರೆಸ್ಟ್ ಕಡೆಗೆ ಸಾಗುತ್ತಲೇ ನನಗೆ ಜೊತೆಯ ಸವಾರಳಾಗಿ ಸಿಕ್ಕಿದ್ದು ಮಲೇಷಿಯಾದ ಪೆಶ್ಚ್ ಎಂಬ ಸುಂದರಿ. ಅವಳು ಮತ್ತವಳ ಬೈಕ್ ಬಗೆಗಿನ ಸ್ವಾರಸ್ಯಕರ ಸಂಗತಿಗಳನ್ನ ಮೆಲುಕು ಹಾಕುತ್ತಲೇ ಅದೆಷ್ಟೋ ಜನರ ಹೈ ಪೈ ಗಿಟ್ಟಿಸಿಕೊಳ್ಳುತ್ತಾ ಬ್ರೆಸ್ಟ್ ನ ಹಿಂದೆ ಒಂದತ್ತು ನಿಮಿಷದ ಪವರನ್ಯಾಪ್ ಮೊರೆ ಹೋದಾಗಲೆ ಅಶೀರವಾಣಿಯೊಂದು ಶೆಟ್ಟಪ್ಪವರೆ ಟೈಮ್ ಆಗ್ತಾ ಇದೆ ಎದ್ದೇಳಿ ಎಂದದ್ದು ಮಾತ್ರ ನಮ್ಮ ಬೆಂಗಳೂರಿನ ವುಮೆನ್ ರೈಡರ್ ಕೀರ್ತಿ ಚಲಂ ಮೇಡಂ, ಹ್ಞಾಂ ಮೇಡಂ ಎನ್ನುತ್ತಲೆ ಬ್ರೆಸ್ಟ್ ಸಿಟಿಯ ಸಂಚಾರದ ಮತ್ತೆ ಏಳೆಂಟು ಕ್ಲೈಂಬಗಳು ಮುಗಿಯುತ್ತಲೆ ಬ್ರೆಸ್ಟ್ ಎಂಬ 600 ಕಿಮೀ ನ ಯು ಟರ್ನ್ ಪಾಯಿಂಟ್ ನ್ನ ಒಟ್ಟಾರೆಯಾಗಿ 40 ಘಂಟೆಯೊಳಗೆ ಮುಗಿಸಿಕೊಳ್ಳುವಂತೆ ಕಿವಿ ಮಾತು ಹೇಳಿದ್ದ ನಮ್ಮ ಮತ್ತೋರ್ವ ಗುರುವರ್ಯರಾದ ಧನಂಜಯ ಸರ್ ನ ಮಾತಿಗೆ ಒಗೊಟ್ಟು 38 ಘಂಟೆಯಲ್ಲಿ ತಲುಪಿ ನಿಟ್ಟುಸಿರಬಿಟ್ಟಾಗಿತ್ತು. ಬ್ರೆಸ್ಟನಲ್ಲಿ ಧನಂಜಯ ಸರ್ ಜೊತೆಗೂಡಿ ಪ್ರೆಂಚ್ ನ ಕಹಿ ಕಹಿಯಾದ ಕರಿ ಕಾಪಿಯ ಸೇವನೆ, ಆಗ ಕಂಡ ನಮ್ಮ BR ನ ಡ್ಯಾಷಿಂಗ್ ರೈಡರ ರಘುನಂದನವರನ್ನ ಛೇಡಿಸುತ್ತಾ ಒಂಚೂರು ಹರಟೆಯ ಸರದಿಯ ನಂತರ ಮತ್ತೊಂದು ಪವರ್ ನ್ಯಾಪನ ಹಾವಳಿ.


ಬ್ರೆಸ್ಟನಿಂದ ಹೊರಟ ನಂತರ ರಪ್ ರಸ್ತೆಯ ಕಚಗುಳಿಯ ಜೊತೆಗೆ ಮತ್ತದೆ ಕೆರ್ಹೆಕ್ಸ್ ಮುಲಕ ಲೋಡಿಯಾಕ್ ನೆಡೆಗೆ ಪಯಣ ಮುಂದುವರೆದಾಗಲೆ ಧನಂಜಯ ಸರ್ ಜೊತೆಗೂಡಿ ಮತ್ತಷ್ಟು ಕ್ಲೈಂಬಗಳ ಆರೋಹಣ ಮಾಡುತ್ತಲೆ ಮಧ್ಯರಾತ್ರಿಯ ಸಮಯದಲ್ಲಿ ನಿದ್ದೆಗಣ್ಣಲ್ಲಿ ರೂಟ್ ತಪ್ಪಿಸಿಕೊಂಡು ಕೆಲಹೊತ್ತು ಪರದಾಡುವಂತಾಯಿತು, ಕೊನೆಗೆ ಪ್ರಸಾದ ಸರ್ ಮತ್ತೆ ಸ್ವಾಮಿ ಸರ್ ನ ಸಹಾಯ ಪಡೆದುಕೊಂಡ ನಂತರವಷ್ಟೇ ಮರಳಿ ಟ್ರ್ಯಾಕಿನೆಡೆಗೆ ಬಂದದ್ದು, ಅಂತದ್ದರಲ್ಲಿ ಎಷ್ಟೇ ಪೆಡಲ್ ಮಾಡಿದರೂ ಸ್ಪೀಡೂ ಇಲ್ಲಾ ಎವರೇಜು ಇಲ್ಲಾ ಇತ್ತ ನಮ್ಮ ಪ್ರಶಾಂತ ಹಿರೇಮಠ ಅವರು ಪೋನ್ ಮಾಡಿ ಎಲ್ಲಿದ್ದೀರಿ ಮತ್ತೆ ನೀವ್ಯಾಕೆ ಇಷ್ಟೊಂದು ಸ್ಲೋವಾಗಿದ್ದೀರಿ ಆದಷ್ಟು ಬೇಗ ಮುಂದಿನ ಸಿಪಿಗೆ ಬನ್ನಿ ಎಂದು ಒಂಚೂರು ಗಡಸು ದ್ವನಿಯಲ್ಲೆ ಗದರಿದರು, ಆ ಕ್ಷಣಕ್ಕೆ ಮರುಮಾತಾಡದೆ ಗುರು ಆಜ್ಞೆಯ ಪಾಲನೆಯೊಂದೆ ದಾರಿಯೆಂಬಂತೆ ಮುನ್ನಡೆದಾಯಿತು, ಅದಾಗಲೆ ಎರಡು ದಿನಗಳಿಂದ ನಿದ್ದೆಗೆಟ್ಟಿದ್ದ ನಾನು ಯಾವುದೋ ಭ್ರಮಾಲೋಕದಲ್ಲಿ ತೇಲಿಹೋಗಿದ್ದೆ. ದಟ್ಟ ಕಾಡಿನ ಮಧ್ಯದ ಆ ಸುಮಧುರ ಬಾಂಧವ್ಯ ಬೆಸೆಯುವ ಪೆಲಟಾನಗಳ ಹುಡುಕಾಟ ಶುರುವಾದರೂ ಏನು ಪ್ರಯೋಜನವಾಗಿಲಿಲ್ಲಾ, ಅಷ್ಟರಲ್ಲೆ ನಮ್ಮ ಸುನೀಲ ಗೋಪಾಲಾಚಾರಿ ಸರ್ ನೊಂದಿಗೆ ಒಂದಿಷ್ಟು ಹೊತ್ತಿನ ಪ್ರಯಾಣ ಸೊಗಸಾಗಿತ್ತು. ಮತ್ತೆ ಕರ್ಹೇಕ್ಸ ಪ್ಲೋಸರ್ ನ ಮಾರ್ಗವಾಗಿ 800 ಕಿ ಮೀ ನ ರೆಸ್ಟ್ ಪಾಯಿಂಟ್ ಲೋಡಿಯಾಕನೆಡೆಗೆ ಪ್ರಯಾಣವೇನು ಅಷ್ಟು ಸುಲಭವಾಗಿರಲಿಲ್ಲಾ, ಆದರೆ ಧಾರಿಯುದ್ದಕ್ಕೂ



ಎಲ್ಲೂ ರೂಟ್ ಮಿಸ್ ಆಗದ ಹಾಗೆ ಪ್ರತಿ ತಿರುವುಗಳಲ್ಲು, ನೇವಿಗೇಶನ್ ನ ಗುರುತಿನ ಪತ್ರಗಳನ್ನ ಅಂಟಿಸಿದ್ದ ಪುಣ್ಯ ಮಾತ್ರ ಆಯೋಜಕರಿಗೆ ಸಲ್ಲಲೇಬೇಕು. ಫ್ರಾನ್ಸ್‌ನಲ್ಲಿ ಸೈಕ್ಲಿಂಗನ್ನ ಬರೀ ಗೌರವಿಸುವುದಿಲ್ಲಾ ಬದಲಾಗಿ ಆರಾಧಿಸುತ್ತಾರೆ, ಅಷ್ಟೊಂದು ಅದರ ಬಗೆಗಿನ ಕಾಳಜಿ ಇಲ್ಲಿನ ಜನರಿಗೆ. ಫ್ರೆಂಚ್ ದೇಶದ ಗ್ರಾಮಾಂತರದಲ್ಲಿರುವ ಜನರು ತಮ್ಮ ಆತಿಥ್ಯದಿಂದಲೆ



ನಮ್ಮೆಲ್ಲರ ಮನಸ್ಸು ಗೆದ್ದರು. ಹಲವಾರು ಜನರು ನಮಗೆ ನೀರು, ಜ್ಯೂಸ್, ಹಣ್ಣುಗಳು, ಕೇಕ್, ಕಾಫಿ, ಟೀ ವೈವಿಧ್ಯಮಯವಾದ ಸಿಹಿ ತಿಂಡಿಗಳು ಇನ್ನೂಇತ್ಯಾದಿಗಳನ್ನು ಉಣಬಡಿಸುತ್ತಿದ್ದರು ಮತ್ತು ಅವರು ನಮ್ಮನ್ನು ಪ್ರೋತ್ಸಾಹಿಸಿದ ಪರಿಯಕಂಡು ನಾವು ಬೆರಗುಗೊಂಡೇವು. ಬೇರೆ ಬೇರೆ ದೇಶದ ಸಹ ಸೈಕ್ಲಿಸ್ಟ್‌ಗಳು ನಮ್ಮನ್ನು ಬ್ರಾವೊ ಬ್ರಾವೊ ಎಂದು ಪ್ರೋತ್ಸಾಹಿಸಿದ ರೀತಿಯಂತು ಹೃದಯಸ್ಪರ್ಶಿಯಾಗಿತ್ತು. ಆಯೋಜಕರನ್ನ & ಆ ಹಳ್ಳಿ ಜನರ ನಿಸ್ವಾರ್ಥ ಮನೋಭಾವವನ್ನ ನೆನೆಯುತ್ತ ಮುನ್ನಡೆದದ್ದು ಮಾತ್ರ ಲೋಡಿಯಾಕನ ಕಡೆಗೆ.


ಲೋಡಿಯಾಕನೆಡೆಗೆ ಮುನ್ನಡಿ,

ಕೆರ್ಹೆಕ್ಸನ ಬಿಟ್ಹೋಗಿ ಒಡೋಡಿ,

ಇವುಗಳ ಮದ್ಯೆ ಇರುವುದು ಕ್ಲೈಂಬ್ ಗಳ ಮೋಡಿ,

ಕೆಣಕುತ್ತಲೇ ಇದ್ದವು ಕಚ್ಚಾ ರಸ್ತೆಯ ಬೋಡಿ ಬೋಡಿ,

ನಾನಾಗಿದ್ದೆ ಆ ಬೀದಿಬದಿಯ ವಡನಾಡಿ...🤫🤗


ಇಲ್ಲಿ ನನ್ನ ಕಣ್ಣೀಗೆ ಕಂಡಿದ್ದು ಮೋಹನ ಸರ್, ಅವರು ಕೂಡಾ ನಮ್ಮನ್ನ ಲೈವ್ ಟ್ರ್ಯಾಕ್‌ನ ಅಡಿಯಲ್ಲಿ ಗಮನಿಸುತ್ತಿದ್ದದ್ದನ್ನ ತಿಳಿದಾಗ ಖುಷಿಯಾಯಿತು, ಮತ್ತೆ ಚೆನ್ನಾಗಿ ಒಡಸ್ತಾ ಇದೀರಿ ಇದೆ ರೀತಿ ಒಳ್ಳೆಯ ಬಪರ್ ಉಳಿಸಿಕೊಂಡು ಮುನ್ನಡೆಯಿರಿ ಎಂದು ಹೇಳಿದ ಕಿವಿಮಾತಿನ ಮೇಲೆ ಮುನ್ನಡೆದಾಯಿತು. ಹೀಗೇನೆ ಹಿಂದಿನ ಪಯಣದ ಅನುಭವ ಹೊತ್ತು ಮುಂದೆ ಸಾಗಿದ್ದು Tinteniac ಮತ್ತೆ Fougeres ನ ಮಾರ್ಗವಾಗಿ Villaines ಕಡೆಗೆ ಅಲ್ಲಿಂದ ಪ್ರತಿ ಸಿಪಿಯ ಅಂತ್ಯದ ಅಣಕುಗಳು ಅಷ್ಟಾಗಿ ನೆನಪಾಗಿ ಉಳಿದಿಲ್ಲಾ ಕಾರಣ Hallucination ಪ್ರತಿ ಹಂತದಲ್ಲು ನಿದ್ರಾ ದೇವತೆ ಮಾತ್ರ ರೆಡ್ ಕಾರ್ಪೆಟ್ ಹಾಕಿ ಕೈ ಬೀಸಿ ಕರೆಯುತ್ತಿದ್ದಳು, ಅವಳ ಅನತಿಯಂತೆ ಕೆಲವು ಬಾರಿ ಶರಣಾಗತಿಯೊಂದೆ ಧಾರಿಯಾಗಿತ್ತು. ಅದನ್ನು ಮೀರಿ Mortagne ಮತ್ತೆ Dreux ವರೆಗಂತು ತೀರ ಅನಾಯಾಸದ ಪಯಣವಾಗಿತ್ತು. Dreux ನ ನಂತರ ಪಿನಿಷಿಂಗ್ ಪಾಯಿಂಟ್ Rambouillet ವರೆಗೆ ರೋಮಾಂಚನಕಾರಿ ರೈಡು, ಆಗ ಬಹಳಷ್ಟು ಜನರ ಗಮನ ನಮ್ಮ ಮೇಲೆಯೇ ಇತ್ತೆಂಬುವುದು ತದನಂತರವೆ ನಮ್ಮ ಅರಿವಿಗೆ ಬಂತು. ಪಿನಿಷಿಂಗ್ ಮ್ಯಾಟನ ಕ್ರಾಸ್ ಮಾಡುವಾಗಿನ




ಅನುಭವವಂತು ಹೇಳತೀರದು. ಕೆಲ ಭಾರತೀಯರ ಜಯಘೋಷ್ ಗಳು, ನಮ್ಮನ್ನ ಮತ್ತಷ್ಟು ಹುಚ್ಚೆಬ್ಬಿಸಿದ್ದಂತು ಅಷ್ಟೇ ಸತ್ಯ.

ಒಟ್ಟಾರೆಯಾಗಿ 88:14:31 ಟೈಮನೊಂದಿಗೆ ರೈಡ್ ಮುಕ್ತಾಯ.



ಆಯೋಜಕರಿಂದ ಬ್ರೆವೆಟ್ ಕಾರ್ಡಿನ ಕೊನೆಯ ಸಿಪಿಯ ಸ್ಟ್ಯಾಂಪಿಂಗ್ ಮಾಡಿಸಿಕೊಂಡು ಪಿನಿಷರ್ ಮೆಡಲ್ ಕೊರಳಿಗೆ ಹಾಕಿಸಿಕೊಳ್ಳುವಷ್ಟರಲ್ಲಿಯೇ ನಮ್ಮ HBC ಎಕ್ಸ್ ಸೆಕ್ರೇಟರಿವರಾದ ಶಿವಾನಂದ ದಂಡಾವತಿಮಠ ರಿಂದ ಕಂಗ್ರಾಜುಲೇಷನ್ಸ್ ಎಂಬ ಉದ್ಗಾರವಾಚಕ ಕೇಳಿ ಒಂದು ಕ್ಷಣದ ಮೌನದ ಜೊತೆಗೆ ಕಣ್ತುಂಬಿ ಬಂದ ಭಾವುಕ ಘಳಿಗೆಯದು. ಅಲ್ಲಿಂದ ನಮ್ಮ ಪಯಣ BR ಟೀಮಿನ ಟೆಂಟಿನೆಡೆಗೆ ಸಾಗಿ ಪರಸ್ಪರ ಹಸ್ತಲಾಘವ & ಉಭಯ ಕುಶಲೋಪರಿಯೊಂದಿಗೆ ಶುಭಾಶಯಗಳ ವಿನಿಮಯ ಕಾರ್ಯದ ಜೊತೆಗೆ ಮೋಹನ ಸರ್ ನ ಹೈ ರೇಷಲೂಷನ್ನಿನ ಕ್ಯಾಮೆರಾದ


ಕಣ್ಣಂಚಿನಲ್ಲಿ ಅಚ್ಚೊತ್ತಿಸಿಕೊಂಡ ಕ್ಷಣವಂತು ಹೇಳತೀರದು.

ಕಾಲಾನುಕ್ರಮಕ್ಕೆ ತಕ್ಕಂತೆ ಹುಬ್ಬಳ್ಳಿ ಬೈಸಿಕಲ್ ಕ್ಲಬ್ಬಿನ ಹೆಮ್ಮೆಯ ಸದಸ್ಯನಾಗಿ ಹೊರಹೊಮ್ಮಿರುವುದಕ್ಕೆ ಅತೀವ ಸಂತಸ.

ಮತ್ತು ಈ ರೈಡಿನುದ್ದಕ್ಕೂ ನನಗೆ ಸಾಥಿಯಾಗಿ ನಿಂತ ನಿಮಗೆಲ್ಲಾ & ನನ್ನ ಜೀವನದುದ್ದಕ್ಕೂ ನಾನು ಈ ಅದ್ಭುತವಾದ ಕ್ಷಣಗಳನ್ನ ಪ್ರೀತಿಸುತ್ತಲೆ ಇರುತ್ತೇನೆ.ನಾನು ಈ PBP 2023 ರ ರೈಡನ್ನು ಮುಗಿಸಿದ ಮೊದಲ HBCian ಎಂದು ಹೇಳಿಕೊಳ್ಳಲು ಖುಷಿ ಮತ್ತು ಹೆಮ್ಮೆಯೆನಿಸಿತು. ಆದರೆ ಇದೊಂದು ಖಂಡಿತವಾಗಿಯೂ ನನ್ನ ಸಾಧನೆಯಲ್ಲ. ಇದರ ಹಿಂದೆ ದೊಡ್ಡ ತಂಡವೇ ಇದೆ ಮತ್ತೆ ಒಂದು ದೊಡ್ಡ ಶಕ್ತಿಯೆ ಇದೆ. ಆ ಶಕ್ತಿಯೆ ನೀವೆಲ್ಲಾ, ನಾನು ಯಾವಾಗಲೂ ನಿಮ್ಮೆಲ್ಲರಿಗೂ ಚಿರಋಣಿಯಾಗಿರುತ್ತೇನೆ.


Siddalinga Swamy ಸರ್


ಅವರೊಂದು ಅದ್ಭುತ ಮತ್ತು ಪ್ರೀತಿಪಾತ್ರತ್ವದ ವ್ಯಕ್ತಿತ್ವ, ಅವರೇ ನನ್ನ ಗುರು ಅವರೇ ಎನಗೆ ಸ್ಫೂರ್ತಿಯ ಸೆಲೆ. ಅವರು ತೋರಿದ ಹಾದಿಯಲ್ಲಿ ನಡೆಯುತ್ತೇನೆ. ಸರಿಸುಮಾರು ಒಂದು ವರ್ಷದ ಹಿಂದೆ 2023ರ PBP ರೈಡ್ ಮಾಡುವಂತೆ ಹುರಿದುಂಬಿಸಿದರು ಮತ್ತೆ ನನ್ನನ್ನು ತಯಾರಿಗೊಳಿಸಿ ನನಗೆ ನೈತಿಕವಾಗಿ ಬೆಂಬಲ ನೀಡಿ ಯಾವತ್ತಿಗೂ ಪ್ರೋತ್ಸಾಹಿಸಿ ಎಂದಿಗೂ ಅಲ್ಲಿ ನಾನಿದ್ದೇನೆ ಎಂದರು ಇದಕ್ಕೆಲ್ಲಾ ನೀವೆ ಕಾರಣಿಕರ್ತರು ಎಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ ಸರ್....👏👏




Dhananjay Shankarlingegowd ಸರ್


ನೀವೊಬ್ಬ ಶಿಸ್ತಿನ ಸಿಪಾಯಿ ಮಾತ್ರವಲ್ಲ ಒಬ್ಬ ಅದ್ಭುತ ಮೋಟಿವೇಟರ್, ನನ್ನ ಹಲವು ಕನಸುಗಳಿಗೆ, ವ್ಯತಿರಿಕ್ತ ಸಂಕಷ್ಟಗಳಿಗೆ ನೀವೆ ಧಾರಿದೀಪವಾಗಿದ್ದೀರಿ. ನಿಮಗಿದೋ ಶರಣು...🙏🙏







Mohan Subhramanyam ಸರ್


ಕಳೆದ 6 ತಿಂಗಳುಗಳಿಂದ ನೀವು ಕೊಟ್ಟಂತಹ ಸಂವಹನ & ಮಾಹಿತಿಯಿಂದ ಮಾತ್ರ ನಾನು ಇದನ್ನು ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಿಕೊಳ್ಳಲು ಖುಷಿಯೆನಿಸುತ್ತದೆ....✌✌










Prasad Sadashiv ಸರ್


ನೀವು ಬೆನ್ನತ್ತಿರುವ ಕನಸುಗಳೆಡೆಗೆ ನಮ್ಮನ್ನು ಸಹ ಕರೆದೊಯ್ಯುವ ನಿಮ್ಮ ಆ ಛಾಪಿಗೆ ನಾವೇನೆಂದು ಹೆಸರಿಡೋಣಾ ನೀವೆ ಹೇಳಿ...? ನೀವೊಂದು ನಿಷ್ಕಲ್ಮಶ ಹೃದಯದ ಒಡೆಯರಾಗಿದ್ದೀರಿ....💚







Prashant Hiremath ಸರ್


ನಾನು ಮತ್ತೆ ನನ್ನ ಉಪಟಳವನ್ನ ಸಹಿಸಿಕೊಂಡ ನಿಮಗೆ ನೀವೇ ಸಾಟಿ. ಅದೆಂತ ಸಂಯಮತೆ ನಿಮ್ಮದು, ಪ್ರತಿ ಸಂದಿಗ್ಧತೆಯ ತಿರುವಿನಲ್ಲು ನೀವು ಜೊತೆಯಾಗಿದ್ದು ತಿವಿದು, ತೀಡಿ, ತಿದ್ದಿದ್ದೀರಿ ಧನ್ಯವಾದ ಎಂಬುವುದೊಂದು ಸಣ್ಣ ಪದವಾದೀತು ಕ್ಷಮೆಯಿರಲಿ...🙏



ThimmeshKumar ಸರ್


ಅವರು ಸರಳತೆಯ & ಉದಾರತೆಯ ಮೂರ್ತಿ ನನ್ನ ಪರಿಸ್ಥಿತಿಯ ಕಂಡು ಸರಿಯಾದ ಕ್ಷಣದಲ್ಲಿ ನನಗೆ ತಮ್ಮ BMC ಬೈಕು ತೆಗೆದುಕೊಂಡು ಹೋಗುವಂತೆ ಹೇಳಿದರು. ಅದರಿಂದ ನನಗೆ ತುಂಬಾ ಸಹಕಾರಿಯಾಯಿತು ಅದರ ಬಹುಪಾಲು ಶ್ರೇಯ ನಿಮಗೆ & ನಿಮ್ಮ ಬೈಕಿಗೆ ಸಲ್ಲಬೇಕು....💝






Prasanna Joshi ಸರ್


ನನ್ನ ಬೆನ್ನ ಹಿಂದಿನ ರಹಸ್ಯ ನನಗೆ ಕಂಡಿಲ್ಲಾ ಆದರೆ ಅಲ್ಲಿ ನೀವಿದ್ದೀರಿ ಎಂಬ ಭಾವ ಭರವಸೆಯೊಂದೆ ಸಾಕೆನಗೆ, ನೂರಾನೆಯ ಬಲವಿದ್ದಂತೆ.....🙏💪






*Special thanks to*


Hubballi Bicycle Club

Bangalore Randonneurs

Bagalkot Bicycle Club

Venugram Cycling Club Belgaum

Belgaum Pedllers

Haveri Cycling Club

Dharwad Cycling Club

Hubballi Fitness Club

Hescom

KPTCL


15 views0 comments

Recent Posts

See All
  • Facebook
  • Twitter
  • YouTube
  • Instagram
  • Whatsapp
bottom of page