top of page
Search

1200 KM in 88 Hours 58 minutes


ಪ್ರತಿ ಕನಸಿಗೆ ರೆಕ್ಕೆ ಕಟ್ಟಿಕೊಂಡು ಹಾರುವ ಮನಸಿದ್ದರೂ ಕೆಲ ಸಮಯ ಅದು ಈಡೇರುವುದು ಕಷ್ಟಸಾದ್ಯ.ಆದರೇ ಬಣ್ಣ ಬಣ್ಣದ ರೆಕ್ಕೆಗಳ ಕಟ್ಟಿಕೊಂಡು ಹಾರುತ ನಡೆದೆ ನಾ ಜೋಗದೆಡೆಗೆ,,,,, ಜೋಗದ ತುದಿಯಿಂದ ನೆಗೆದ ನನ್ನ ಮನವ ತಣೆಸಿದ್ದು ಕಡಲ ಕಿನಾರೆಯ ನಾರಿ ಗೋವೆ. ಹೌದು ನನ್ನ ಪ್ರತಿನಿತ್ಯದ ಕಾರ್ಯ ಪರಿದಿಯಿಂದಾಚೆ ಇದ್ದ ಒಂದು ಸುಂದರವಾದ ಪ್ರಪಂಚದ ತಿರುಳು ನನಗೆ ತಿಳಿದಿರಲಿಲ್ಲ, ಹಲವರು ತೋರಿದ ಪ್ರೀತಿ, ಉತ್ಸಾಹ, ಮಾರ್ಗದರ್ಶನ,,,,,🙌🙌 ಒಲವೆಂಬ ಲತೆಗೆ ನೀರುಣಿಸಿ ಪೋಸಿಸಿದ ಪರಿಯಂತೂ ವರ್ಣಿಸಲಸಾಧ್ಯ. ನನ್ನನ್ನು ನಾನು ಸವಾಲುಗಳಿಗೆ ಒಡ್ಡಿಕೊಂಡು ಪರಿತಪಸಲಿಲ್ಲ, ಮೇಲಾಗಿ ನಿಮ್ಮೆಲ್ಲರ ಬಗ್ಗೆ ಹೆಮ್ಮೆಯಾಯಿತು.ನೀವೆಲ್ಲರೂ ಹೆಮ್ಮೆ ಪಡುವಂತಹ ಒಂದು ಸಣ್ಣ ಪ್ರಯತ್ನವನ್ನಷ್ಟೇ ನಾನು ಮಾಡಿರುವೆ.


ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಿಂದ ಹೊರಟ ನಮ್ಮ ಪಯಣಕ್ಕೆ ಸಾತ್ ಕೊಟ್ಟಿದ್ದು 50 ಜನ ಸೈಕ್ಲಿಸ್ಟ್ಗಳು, ಎಲ್ಲರೂ ಲಘು ಬಗೆಯಿಂದ ಸಾಗಿ ಗೋವೆಯ ಸಮುದ್ರ ದಡ ಸೇರೋ ತವಕ. First Manned CP @Mathigatta ದಲ್ಲಿ ಸವಿದ ಚೌಚೌಬಾತನ ಸವಿರುಚಿ ಅದ್ಭುತ, ನಂತರ ಜೋಗದೆಡೆಗೆ ಶಿವಮೊಗ್ಗ ಮಾರ್ಗವಾಗಿ ವಿಶ್ವವಿಖ್ಯಾತ ಜೋಗಪಾಲ್ಸನ ರಮ್ಯತೆಯನ್ನ ಈ ಬಿರು ಬಿಸಿಲಲ್ಲೂ ಕಾಣಸಿಗುವುದು ಅಪರೂಪವೇ ಸರಿ. ಜೋಗಕ್ಕೆ ಸೈಕಲ್ ಸವಾರಿ ಮಾಡಬೇಕೆಂಬ ನನ್ನ ಬಹುದಿನದ ಆಸೆಯೊಂದು ಸಂತೃಪ್ತಿಯೊಂದಿಗೆ ಸರಿದು ಹೋಗಿತ್ತು.

ಅಲ್ಲಿಂದ ಮೋಹನ್ ಸರ್ ಕುಮುಟಾದ ಹತ್ತಿ ಕೇರೆ ಕ್ರಾಸ್ ನ S.N. ಹೆಗಡೆಯವರ ಮನೆಯಲ್ಲಿ ಕಾಯ್ತಿದಿನಿ. (For manned cp) ಅಂತ ಹಾಕಿದ Google location ನ ಸಹಾಯ ಪಡೆದರೂ ಅಲ್ಲಿನ ಸ್ಥಳಿಯ ನಿವಾಸಿಗಳ ಒಂದು ಸಣ್ಣ Misguidence ನಿಂದ ಸುಮಾರು 1 ಗಂಟೆಗಳ ಕಾಲ ಹರಣವಾಯಿತು. ನಂತರ ಹೆಗಡೆಯವರ ಮನೆಯ ಊಟದ ರೆಸಿಪಿ ಬಗ್ಗೆ ತಿಳಿದಿದ್ದ ನಮಗೆ, ಘಮ್ಮೆನಿಸುವ ಪಲಾವಿನ ಪರಿಮಳ, ಕೇಸರಿಬಾತ್ನಲ್ಲಿ ಮಿಲನಿಸಿದ ತುಪ್ಪದ ವಾಸನೆ ನಮ್ಮನ್ನು ತುಂಬಾ ಗಾಢವಾಗಿ ಸೆಳೆದಿದ್ದವು. ಹೆಗಡೆ ಮಾತೆಯ ಕೈರುಚಿ, ಹೇಳತೀರದು. ಹಲವು ಬಗೆಯ ಖಾದ್ಯಗಳನ್ನು ಬಾಯಿತುಂಬಾ ಚಪ್ಪರಿಸಿ ಮುನ್ನಡೆದರೆ ಅಘನಾಶಿನಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯೊಂದು ತುಂಬಾ ಮನೋಹರವಾಗಿತ್ತು. ಅಲ್ಲಿಂದ ಮುಂದೆ ಸಿಕ್ಕ ಸಣ್ಣ ಪುಟ್ಟ ಕ್ಲೈಂಬಗಳು ನಮ್ಮನ್ನ ಕೆಣಕುತ್ತಿದ್ದವು.

ಕಾರವಾರದ ನಂತರ ಶುರುವಾದ ನನ್ನ ಪಂಚರ್ ಪಯಣ ಕೆಲ ಹೊತ್ತು ಕೂತು ಅಳುವುದೊಂದೇ ಬಾಕಿ. ಪದೇಪದೇ ಸಂಭವಿಸಿದ 4 ಪಂಚರಗಳು ನನ್ನನ್ನು ಹತಾಶನನ್ನಾಗಿಸಿದ್ದವು. ನನ್ನ ಮೂಕರೋಧನೆ ಕಥೆ ಕೇಳಲು ಅಲ್ಲಿ ಯಾರೂ ಸಿದ್ಧರಿರಲಿಲ್ಲ. ನನ್ನ ಹತ್ತಿರವಿದ್ದ spare tubes ಗಳು ಸಹ ಮುಗಿದಿದ್ದವು, ನಂತರ ನಡೆದಿದ್ದೆಲ್ಲ ಪವಾಡ. ನಾನಾಗ ನೆನೆಯದ ದೇವರು ಇರಲಿಲ್ಲ ಕೇಳದ ವರಗಳಿರಲಿಲ್ಲ ನನ್ನ ಸಹಾಯಕ್ಕೆ ದಾವಿಸಿದ್ದು ಶ್ರೀಯುತ ಸಿದ್ದಲಿಂಗಸ್ವಾಮಿ ಸರ್ ಮತ್ತು ಪ್ರಸಾದ್ ಸರ್ ಅವರಿಗೆ ಕೋಟಿ ನಮನಗಳು. ನಂತರ ಬೆಳಗ್ಗೆ ‌4 ಗಂಟೆಗೆ ಮಾರ್ಗವೇ ನಿತ್ಯಾನಂದ ರೆಸಿಡೆನ್ಸಿಯಲ್ಲಿ ಒಂದುವರೆ ಗಂಟೆ ವಿಶ್ರಾಂತಿ ಆದಮೇಲೆ ಮಾರ್ಗೋವಾದಿಂದ ಮೌಲೆಮ್ ಘಾಟನ ಸರದಿ.

ಮುಂಜಾವಿನ ಮಬ್ಬಲ್ಲೂ ಬೆವರು ಹನಿಗಳ ರುಚಿ ತೋರಿಸಿದ್ದು ಇದೆ ಮೌಲೆಮ ಘಾಟನ ರಾಣಿ, ಅಲ್ಲಿ ಪಶ್ಚಿಮಘಟ್ಟಗಳ ಸಾಲಿನಲ್ಲಿ ಸಿಕ್ಕ ಸಣ್ಣ ಪುಟ್ಟ ಝರಿಗಳು, ಕಿರು ಜಲಪಾತಗಳು ವಿವ್ ಪಾಯಿಂಟ್ಗಳು. ಸ್ವಲ್ಪ ಹೊತ್ತಿಗೆ ನಮ್ಮ ದಣಿವಿಗೆ ವಿರಾಮ ಇಟ್ಟದ್ದಂತು ಸತ್ಯ.

ಮುಂದೆ ಸಾಗುತ್ತ ನಮ್ಮ ಪಯಣ ಕ್ಯಾಸಲ್ರಾಕ್ ಮಾರ್ಗವಾಗಿ ಜಗಲಪೇಟ್, ಗಣೇಶಗುಡಿ ಯಿಂದ ಸೂಪಾ ಡ್ಯಾಮಿನ ವಿದ್ಯುದಾಗರದ ಮೂಲಕ ಭಾಪೇಲಿ ಕ್ಲಾಸಿನವರೆಗಿನ ನಮ್ಮ ಪಯಣ ಅಷ್ಟೇನೂ ಸುಖಕರವಾಗಿರಲಿಲ್ಲ. Climbing, climbing, climbing was horrible, ದಾಂಡೇಲಿ, ಹಳಿಯಾಳ ಕ್ರಾಸ್ನಿಂದ ಯಲ್ಲಾಪುರದ ವರೆಗಿನ ಪ್ರಯಾಣ ಕೂಡಾ ಮಧ್ಯೆ ರಾತ್ರಿಯ ಪ್ರಯಾಣ ಹೇಳಿಕೇಳಿ ಕಾಡುಪ್ರಾಣಿಗಳ ಹಾವಳಿ ಜಾಸ್ತಿ ಇರುವಂತಹ ನಿರ್ಬಂಧಿತ ಪ್ರದೇಶ ನಾಜೂಕಿನಿಂದಲೇ ಸಾಗಿದ ನಮ್ಮ ತಂಡದ ಸದಸ್ಯರೆಲ್ಲರೂ ನಿಟ್ಟುಸಿರ ಬಿಟ್ಟಿದ್ದು ಮೋಹನ್ ಸರ್ ಕೈಯಲ್ಲಿದ್ದ ಮೊಸರನ್ನ ಪ್ಯಾಕೆಟ ನೋಡಿದಾಗಲೇ ಮುಂದಿನ ಊರಿಗೆ ಬಂದಾಗ ಪೊಲೀಸ್ ಅಧಿಕಾರಿಯೊಬ್ಬರ ವಿಚಾರಣೆ ಬೇರೆ ನಮ್ಮ ಮೇಲೆ.... ಅದನ್ನು ಕಂಡು ಸಿಡಿಮಿಡಿಗೊಂಡ ನಮ್ಮ High court advocate Rajanees kn ಅವರು ಹೇಗೋ ವಾದ ಮಾಡಿ ಅಲ್ಲಿಂದ ನಮ್ಮೆಲ್ಲರನ್ನು ಪಾರುಮಾಡಿ ಹಾವೇರಿ ಚೆಕ್ಪಾಯಿಂಟ್ ಗೆ ಕರೆತಂದರು.

ಅಲ್ಲಿ ಸುಮಾರು ಒಂದು ಗಂಟೆ ವಿಶ್ರಾಂತಿ ತೆಗೆದುಕೊಂಡು Monis calappa ಸರ್ ಮತ್ತೆ Rohit BV ಸರ್ ರವರ ಸಲಹೆ ಸೂಚನೆಗಳನ್ನು ಪಡೆದುಕೊಂಡು ರಾಣೆಬೆನ್ನೂರು ಮಾರ್ಗವಾಗಿ ನಮ್ಮ ಆತ್ಮೀಯರಾದ ಸಂತೋಷ್ ಕೆಂಚಪ್ಪನವರ (ಸೈಕಲಿಷ್ಟ)ರನ್ನು ಭೇಟಿ ಮಾಡಿ ಆವರೆಗಿದ್ದ ನಮ್ಮ ತಂಡದ ಬಲ ಸ್ವಾಮಿ ಸರ್, ಪ್ರಸಾದ್ ಸರ್, ಮಿಲನ್ ಸರ್, ರಜನೀಶ್ ಸರ್ ಮತ್ತು ಮತ್ತೆ ನಾನು. ತದನಂತರ Rohit Chandrashekhar, Ashutosh Belur, Amar Chand sir ಸೇರಿದಾಗ ಬಳಗಕ್ಕೆ ಬಲ ಬಂತು. ಚಿತ್ರದುರ್ಗ,ಶಿರಾ,ತುಮಕೂರು....... ಸತತ ನಾಲ್ಕು ದಿನಗಳಿಂದ ನಿದ್ದೆಗೆಡಿಸಿದ್ದ ನಮ್ಮನ್ನು ನಿದ್ರಾದೇವತೆ ಕೈಮಾಡಿ ಕರೆಯುತ್ತಿದ್ದಳು. ಯಾವುದನ್ನೂ ಲೆಕ್ಕಿಸದೆ ಮುನ್ನಡೆದ ನನಗೆ. ನಿದ್ರಾದೇವತೆ ಶಾಕ್ ಕೊಟ್ಟಳು.

ಅಲ್ಲಿಯವರೆಗೆ ಶಾಂತವಾಗಿದ್ದ ನನ್ನ ಗ್ಲೋರಿಯ ಒಂದು ಸಣ್ಣ ಹಳ್ಳಕ್ಕೆ ಬಿದ್ದು ತಗಾದೆ ತೆಗೆದಳು.

ಅಂಗಾಂಗಗಳ ಆದ Frame & Forkಗಳು ತನ್ನ ಸೀಮಿತವನ್ನ ಕಳೆದುಕೊಂಡಿದ್ದವು ಆಗ ಅವಳು ಮುನ್ನಡೆಯುವುದೇ ದುಸ್ತರವಾಗಿ ಬಿಟ್ಟಿತ್ತು ಆಗಲೂ ನಮ್ಮ ತಂಡ ದೃತಿಗೆಡದೆ ಮತ್ತೆ ನನ್ನ ಬೆನ್ನಿಗೆ ನಿಂತರು ಹಲವುಕಡೆ ಮತ್ತೊಂದು ಸೈಕಲ್ ಬಗ್ಗೆ ಹುಡುಕಾಡಿ ತಡಕಾಡಿದರೂ ಫಲಿತಾಂಶ ಮಾತ್ರ ಶೂನ್ಯ. ಆಗ ಸಮಯ ಸರಿಯಾಗಿ 4:29 ನಿಮಿಷ cut off time 10:00 ಘಂಟೆಯವರೆವಗಿತ್ತು endpoint ಇನ್ನು 70km ಇತ್ತು, ತಲೆಯಲ್ಲಿ ಇದ್ದದ್ದು ಒಂದೇ I have to finish ಅಂತ, ಹಲವು ಜನರ ಸಹಾಯ ಸಹಕಾರ ಪ್ರೀತಿ ವಿಶ್ವಾಸ ನನ್ನನ್ನು endpoint ವರೆಗೆ ಕರೆತರುವಲ್ಲಿ ಯಶಸ್ವಿಯಾಗಿತ್ತು. Bangalore Randaneours ಆಡಳಿತ ವರ್ಗದ ವ್ಯವಸ್ಥೆ, ಪ್ರತಿ ಚೆಕ್ ಪಾಯಿಂಟಲ್ಲಿ ಅವರು ನಮಗೆ ತೋರಿದ ಕಾಳಜಿ, next Cp ವರೆಗೆ ನಮ್ಮನ್ನ Push ಮಾಡತಿದ್ದ ರೀತಿಯಂತು ಅಧ್ಬುತ. Route details ಗಳನ್ನ ಮೊದಲೇ ಹೇಳಿದ್ದರಿಂದ ಎಲ್ಲವೂ ನಮ್ಮ ಮೈಂಡಸಟ್ ಗೆ ಅನುಗುಣವಾಗಿ, ಸುಲಲಿತವಾಗಿ ಸಾಗಿತು.....

So totally well organised event from Bangalore Randonneurs....take a bow🙌🙌🙏🙏💐💐💐

Special thanks to.....👏👏

Siddalinga Swamy

Prasad Sadashiva

Mohan subramanya

Rajanees kn

Dr Netra shirur

9 views0 comments

Recent Posts

See All

Kommentare


  • Facebook
  • Instagram
  • Whatsapp
  • Youtube
  • Twitter
bottom of page