ಹುಬ್ಬಳ್ಳಿಯಿಂದ ಹಳಿಯಾಳ
- Shivanand Dandavatimath
- Dec 4, 2020
- 1 min read

ಕ್ಕೆ ಹೊರಟು ನಿಂತ ಸುಮಾರು ಇಪ್ಪತ್ತೈದು ಮೂವತ್ತು ಜನ ಸೈಕ್ಲಿಸ್ಟ್ ಗಳು ಹೊಸ ರೂಟ್ ಹಿಡಿದು ನಡೆದಾಗ ನಮ್ಮ ತಂಡದಲ್ಲಿ ಹರ್ಷದ ಹೊನಲು, ಹಳಿಯಾಳದ ಕಿಲ್ಲಾ ಕೋಟೆಯ ಯುಟರ್ನ್ ಪಾಯಿಂಟಲ್ಲಿ ನಮ್ಮ ಸೈಕ್ಲಿಸ್ಟಗಳನ್ನ ತಾವೆಲ್ಲರೂ ಅಷ್ಟೊಂದು ಸಂಯಮತೆಯಿಂದ ಕಾದು ಸ್ವಾಗತಿಸಿದ ಪರಿ ಕಂಡು ಒಂದು ಕ್ಷಣ ನಾವು ನಮ್ಮನ್ನೇ ಮರೆತಂತಾಯಿತು. ಹಳಿಯಾಳದ ಕೋಟೆಯೋಳಗೆ ಪ್ರವೇಶಿಸುತ್ತಲೇ ಏನೋ ಒಂಥರಾ ಖುಷಿಯ ಅನುಭವ.... ಹೊಸ ಹೊಸ ಸೈಕ್ಲಿಸ್ಟಗಳ ಕಣ್ಣಲ್ಲಿನ ಕಾಂತಿಯ ನೋಟ ನಮ್ಮ ಮನಸ್ಸು ಕದ್ದಿರುವುದಂತು ಅಷ್ಟೇ ಸತ್ಯ, ಮುಂಬರುವ ದಿನಗಳಲ್ಲಿ ತಮ್ಮ ಹಳಿಯಾಳ ಸೈಕ್ಲಿಂಗ್ ಕ್ಲಬ್ ಕೂಡಾ ಒಂದು ಒಳ್ಳೆಯ ಮಟ್ಟಕ್ಕೆ ಬೆಳೆಯಲಿ ಎಂಬುವುದೇ ನಮ್ಮ ಹಾರೈಕೆ. ಒಟ್ಟಾರೆಯಾಗಿ ಇವತ್ತಿನ ನಿಮ್ಮ ವ್ಯವಸ್ಥೆಯನ ರೂವಾರಿಗಳಾದ ಉದಯ ಹೂಲಿ, ಉದಯ ಜಾದವ ಮತ್ತು ನಿಮ್ಮ ಇಡೀ ತಂಡಕ್ಕೆ ಹುಬ್ಬಳ್ಳಿ ಬೈಸಿಕಲ್ ಕ್ಲಬ್ ವತಿಯಿಂದ ಹೃದಯಸ್ಪರ್ಶಿ ವಂದನೆಗಳು.....

Comments